ಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಭಾಸ್ಕರ್ ಶೆಣೈ ಅವಿರೋಧ ಆಯ್ಕೆ

ಗಂಗೊಳ್ಳಿ ಟೌನ್ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಭಾಸ್ಕರ್ ಶೆಣೈ ಅವಿರೋಧ ಆಯ್ಕೆ.

ಉಡುಪಿ ಜಿಲ್ಲೆಯ ಪ್ರತಿಷ್ಟಿತ, ರಾಜ್ಯ ಪ್ರಶಸ್ತಿ ವಿಜೇತ ಸಹಕಾರ ಸಂಸ್ಥೆ ಗಂಗೊಳ್ಳಿ ಟೌನ್ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷರಾಗಿ ಯುವ ಸಹಕಾರಿ ಶ್ರೀ ಜಿ. ವೆಂಕಟೇಶ್ ಭಾಸ್ಕರ್ ಶೆಣೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ಸಂಘದ ಶ್ರೀ ಎಚ್. ಎಲ್. ಕಾಮತ್ ಆಡಳಿತ ಮಂಡಳಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ರಿಟರ್ನಿಂಗ್ ಅಧಿಕಾರಿ, ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಹಿರಿಯ ಅಭಿವೃದ್ಧಿ ಅಧಿಕಾರಿ ಶ್ರೀ ಸುನಿಲ್ ಕುಮಾರ್ ಸಿ ಎಮ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಶ್ರೀಯುತ ಶೆಣೈ ಯವರು ಕಳೆದ 10 ವರ್ಷಗಳಿಂದ ಸಹಕಾರಿಯ ನಿರ್ದೇಶಕರಾಗಿ, ಕಳೆದ 18 ತಿಂಗಳುಗಳಿಂದ ಅಧ್ಯಕ್ಷರಾಗಿ ಸಂಘದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ಸಂಘದ ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಸುಂದರ ಕಟ್ಟಡ ವನ್ನು ಸಂಘಕ್ಕೆ ನಿರ್ಮಿಸಿ ಕೊಡುವುದರಲ್ಲಿ ಶ್ರೀಯುತರು ಮಹತ್ವದ ಪಾತ್ರ ವಹಿಸಿರುತ್ತಾರೆ.

ಆಡಳಿತ ಮಂಡಳಿ ಸದಸ್ಯರ ಸಹಕಾರದೊಂದಿಗೆ ಸಂಘದ ಠೇವಣಿಯನ್ನು 100 ಕೋಟಿಯ ಗಡಿ ದಾಟಿಸಿದ್ದು, ಪ್ರತಿ ತಿಂಗಳು ಆಧಾರ್ ಕಾರ್ಡ್ ಪರಿಷ್ಕರಣೆ ಶಿಬಿರ ಸೇರಿದಂತೆ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಿರುವುದು ಇವರ ಸಾಧನೆಗಳಲ್ಲಿ ಕೆಲವು ಮಾತ್ರ.
ಸಂಘದ ಸಾಧನೆಯನ್ನು ಪರಿಗಣಿಸಿ ಕಳೆದ ನವಂಬರ್ ಮಾಸದಲ್ಲಿ ದ. ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ನೀಡಿ ಗೌರವಿಸಿದೆ.

ಸಂಘದ ಉಪಾಧ್ಯಕ್ಷರಾಗಿ ಶ್ರೀ ಜಿ. ವಿಶ್ವನಾಥ ಆಚಾರ್ಯ ರವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಶ್ರೀಯುತರು ಕಳೆದ 15 ವರ್ಷಗಳಿಂದ ಸಂಘದ ನಿರ್ದೇಶಕರಾಗಿ, 10 ವರ್ಷಗಳಿಂದ ಉಪಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ.

ಸಭೆಯಲ್ಲಿ ನಿರ್ದೇಶಕರಾದ ಶ್ರೀ ಎನ್. ಮಾಧವ ಕಿಣಿ, ಶ್ರೀ ಕೆ ಪರಮೇಶ್ವರ ನಾಯಕ್, ಶ್ರೀ ರಾಮನಾಥ್ ಚಿತ್ತಾಲ್, ಶ್ರೀ ನಾಗಪ್ರಸಾದ್ ಪೈ ಎಮ್ ಜಿ., ಶ್ರೀ ನಗರ್ ಅಶ್ವಿನ್ ಕುಮಾರ್ ನಾಯಕ್,ಶ್ರೀಮತಿ ಗೀತಾ ಜಿ ನಾಯಕ್, ಶ್ರೀಮತಿ ದೀಪಲಕ್ಷ್ಮಿ ನಾಯಕ್, ಶ್ರೀ ಮಹಾಬಲ ಪೂಜಾರಿ, ಶ್ರೀ ಕಿರಣ್ ಪಿಲಿಪ್ ಪಿಂಟೋ ಹಾಗೂ ಶ್ರೀ ಜಿ. ಸುರೇಶ್ ಹಾಜರಿದ್ದರು.

ಇದೆ ಸಂದರ್ಭದಲ್ಲಿ ಚುನಾವಣೆ ಪ್ರಕ್ರಿಯೆ ಯನ್ನು ಯಶಸ್ವಿಯಾಗಿ ನಿರ್ವಹಿಸಿದ ರಿಟರ್ನಿಂಗ್ ಅಧಿಕಾರಿ ಶ್ರೀ ಸುನಿಲ್ ಕುಮಾರ್ ಸಿ ಎಮ್ ರವರನ್ನು ಸಂಘದ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಹಿರಿಯ ಸಹಕಾರಿಗಳು ಹಾಗೂ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಶ್ರೀ ಎಚ್. ಗಣೇಶ್ ಕಾಮತ್ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.

ಮುಖ್ಯ ಕಾರ್ಯನಿರ್ವಾಹಕ ಶ್ರೀ ಗಣೇಶ್ ನಾಯಕ್ ಸಹಕರಿಸಿದರು.