ಉತ್ತಮ ಸಹಕಾರಿ ಸಂಘ ಪ್ರಶಸ್ತಿ 2025
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು
ಗುರುತಿಸುವ ಸಲುವಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ
72ನೇ ಅಖಿಲ ಭಾರತ ಸಹಕಾರಿ ಸಪ್ತಾಹ 2025 ರಲ್ಲಿ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂಘಕ್ಕೆ
ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಲಭಿಸಿದೆ.
ನವಂಬರ್ 16 ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಡಾ.ಎಮ್.ಎನ್.ರಾಜೇಂದ್ರ
ಕುಮಾರ್ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಜಿ. ವೆಂಕಟೇಶ್ ಭಾಸ್ಕರ್
ಶೆಣೈಯವರನ್ನು ಮಂಗಳೂರು ದಕ್ಷಿಣ ಶಾಸಕ ಶ್ರೀ ಡಿ. ವೇದವ್ಯಾಸ್ ಕಾಮತ್ ಸನ್ಮಾನಿಸಿ ಪ್ರಶಸ್ತಿ ಪ್ರಧಾನ
ಮಾಡಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಶ್ರೀ ಗಣೇಶ್ ನಾಯಕ್, ನಿರ್ದೇಶಕರಾದ ಶ್ರೀ ಕೆ.
ಗೋಪಾಲಕೃಷ್ಣ ನಾಯಕ್, ಶ್ರೀ ಬಿ. ರಾಘವೇಂದ್ರ ಪೈ ಹಾಗೂ ಶ್ರೀಮತಿ ಗೀತಾ ನಾಯಕ್ ಸಮಾರಂಭದಲ್ಲಿ
ಹಾಜರಿದ್ದರು.
105 ವರ್ಷಗಳ ಇತಿಹಾಸ ಹೊಂದಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂಘವು 100 ಕೋಟಿ
ಠೇವಣಿ ಹೊಂದಿದ ಉಡುಪಿ ಜಿಲ್ಲೆಯ ಮೊದಲ ಸೌಹಾರ್ದ ಸಹಕಾರಿ ಸಂಘವಾಗಿರುತ್ತದೆ. 85 ಕೋಟಿ
ಸದಸ್ಯರ ಸಾಲ, 7 ಕೋಟಿ ಮೀಸಲು ನಿಧಿ, 30 ಕೋಟಿ ಹೂಡಿಕೆ ಹಾಗೂ 3 ಕೋಟಿ ಪಾಲು ಬಂಡವಾಳ
ಹೊಂದಿರುವ ಸಂಘವು ಸತತ 4 ವರ್ಷಗಳಿಂದ 1 ಕೋಟಿಗೂ ಅಧಿಕ ಲಾಭ ಗಳಿಸುತ್ತಿದೆ. ಸಂಘವು
ಬ್ಯಾಂಕಿಂಗ್ ವ್ಯವಹಾರದೊಂದಿಗೆ ಸಾರ್ವಜನಿಕರಿಗೆ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು
ನಡೆಸುತ್ತಿದ್ದು ಕುಂದಾಪುರ ತಾಲೂಕಿನ ಪರಿಸರದ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದು 8% ಬಡ್ದಿ
ದರದಲ್ಲಿ ಚಿನ್ನಾಭರಣ ಸಾಲ ನೀಡಿದ ಜಿಲ್ಲೆಯ ಪ್ರಥಮ ಸಹಕಾರಿ ಸಂಘವಾಗಿರುತ್ತದೆ.
2014 ರಲ್ಲಿ ಸಂಸ್ಥೆಗೆ ರಾಜ್ಯಮಟ್ಟದ ಅತ್ಯುತ್ತಮ ಸಹಕಾರಿ ಸಂಸ್ಥೆ ಪ್ರಶಸ್ತಿ ಲಭಿಸಿದ್ದು ,ಅಂದಿನ ಅಧ್ಯಕ್ಷರಾಗಿದ್ದ
ಶ್ರೀ ಎಚ್. ಗಣೇಶ್ ಕಾಮತ್‌ರಿಗೆ ಶ್ರೇಷ್ಟ ಸಹಕಾರಿ ಪ್ರಶಸ್ತಿ ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ
ಅತ್ಯುತ್ತಮ “ಕಾರ್ಯದರ್ಶಿ” ಪ್ರಶಸ್ತಿ ದೊರಕಿರುವುದು ಸಂಸ್ಥೆಯ ಸಾಧನೆಗೆ ಹಿಡಿದ ಕನ್ನಡಿಯಾಗಿರುತ್ತದೆ.

